Bigg Boss Kannada 5: Week 10: Kiccha Sudeep slams Krishi Thapanda for her behavior during Samyuktha's exit.
ಪ್ಯಾಕೆಟ್ ಗಟ್ಟಲೆ ಹಾಲನ್ನು ಎತ್ತಿಡಲು ಪ್ಲಾನ್ ಮಾಡಿದಾಗ... ಒಂದು ಕಪ್ ಮೊಸರಿನ ಬಗ್ಗೆ ರಂಪ ಮಾಡುವಾಗ... ಪುದಿನ ಸೊಪ್ಪಿನ ಬಗ್ಗೆ ರಾದ್ಧಾಂತ ಶುರು ಮಾಡಿದಾಗ ನಟಿ ಕೃಷಿಗೆ ಇದ್ದ ಜಾಣ್ಮೆ, ಬುದ್ಧಿವಂತಿಕೆ, ಚಾಕಚಕ್ಯತೆ, ಸೂಕ್ಷ್ಮತೆ... ನಟಿ ಸಂಯುಕ್ತ 'ಕಿಕ್ ಔಟ್' ಆದಾಗ ಇರಲಿಲ್ಲವೇನೋ.? 'ಬಿಗ್ ಬಾಸ್' ಮನೆಯ ಮುಖ್ಯ ನಿಯಮ ಮುರಿದು... ಸಮೀರಾಚಾರ್ಯ ಮೇಲೆ ಕೈ ಮಾಡಿ... ವೃತ್ತಿ ಜೀವನಕ್ಕೆ ಮಸಿ ಬಳಿದುಕೊಂಡು ''ಎಷ್ಟೊಂದು ಕಳೆದುಕೊಂಡು ಹೋಗುತ್ತಿದ್ದೇನೆ'' ಅಂತ ಕಣ್ಣೀರು ಸುರಿಸುತ್ತಾ ಸಂಯುಕ್ತ ಹೊರ ಹೋಗುತ್ತಿದ್ದರೆ, ಪಕ್ಕದಲ್ಲಿಯೇ ಇದ್ದ ನಟಿ ಕೃಷಿಗೆ 'ಶೂ' ಚಿಂತೆ.! ತಮ್ಮ ತಪ್ಪಿನ ಅರಿವಾಗಿ ಸಂಯುಕ್ತ ಪಶ್ಚಾತ್ತಾಪ ಪಡುತ್ತಿದ್ದರೆ, ಅವರನ್ನ ಸಮಾಧಾನ ಮಾಡದ ಕೃಷಿ ''ಶೂ ಕೊಟ್ಟು ಹೋಗಲು'' ಸಂಯುಕ್ತ ಬಳಿ ಕೇಳಿಕೊಂಡರು. ಇದನ್ನ ಗಮನಿಸಿದ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕೃಷಿಗೆ ಬೆಂಡೆತ್ತಿದರು.!